ಜೊಮ್ಯಾಟೊ ಗೋಲ್ಡ್‌ ಈಗ ಜೊಮ್ಯಾಟೊ ಪ್ರೊ: ಏನಿದೆ ಹೊಸ ಆಫರ್?


Business

oi-Sagar AP

|

ಬೆಂಗಳೂರು, ಜೂನ್ 30: ಆನ್‌ಲೈನ್ ಫುಡ್‌ ಆರ್ಡರ್ ಮಾಡುವ ರೆಸ್ಟೋರೆಂಟ್ ಮಾರ್ಗದರ್ಶಿ ಜೊಮ್ಯಾಟೊ ಇಂದು ತನ್ನ ಜನಪ್ರಿಯ ಆಫರ್ ಜೊಮ್ಯಾಟೊ ಗೋಲ್ಡ್‌ ನವೀಕರಿಸಿ ಹೊಸ ಚಂದಾದಾರಿಕೆ ಪ್ಯಾಕೇಜ್ ಅನ್ನು ಪ್ರಾರಂಭಿಸಿದೆ.

‘ಜೊಮ್ಯಾಟೊ ಪ್ರೊ’ ಎಂದು ಕರೆಯಲ್ಪಡುವ ಈ ಸದಸ್ಯತ್ವ ಕಾರ್ಯಕ್ರಮವು ರೆಸ್ಟೋರೆಂಟ್ ಮತ್ತು ವಿತರಣೆಯಾದ್ಯಂತದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಸವಲತ್ತುಗಳು ಮತ್ತು ರಿಯಾಯಿತಿಗಳನ್ನು ಹೊಂದಿರುತ್ತದೆ ಎಂದು ಜೊಮ್ಯಾಟೊ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ zomato ಕೊಟ್ಟ ಉತ್ತರಕ್ಕೆ ಫಿದಾ ಆಗಲೇಬೇಕು!

ಎಲ್ಲಾ ಜೊಮ್ಯಾಟೊ ಬಳಿಕೆದಾರರು ಈ ಹೊಸ ಆಫರ್‌ ನಿಂದಾಗಿ ವಿಶೇಷ ಸೌಲತ್ತುಗಳ ಜೊತೆಗೆ ಹಣ-ಹಿಂತಿರುಗಿಸುವ ಖಾತರಿಯು ಸಿಗಲಿದೆ. ಇನ್ನು ಆಗಸ್ಟ್‌ 1ರಿಂದಲೇ ಈಗಾಗಲೇ ಜೊಮ್ಯಾಟೊ ಗೋಲ್ಡ್‌ ಬಳಸುತ್ತಿರುವ ಎಲ್ಲಾ ಬಳಕೆದಾರರು ಜೊಮ್ಯಾಟೊ ಪ್ರೊಗೆ ಅಪ್‌ಗ್ರೇಡ್ ಆಗುತ್ತಾರೆ.

Zomato Benefits: Zomato Gold Is Now Zomato Pro

ಜೊಮ್ಯಾಟೊ ಪ್ರೊ ಸದಸ್ಯರು ಈ ಹಿಂದಿನಿಗಿಂತ ಹೆಚ್ಚಿನ ರೆಸ್ಟೋರೆಂಟ್‌ಗಳು , ಕೆಫೆಗಳು, ಬಾರ್‌ಗಳು, ಮತ್ತು ತ್ವರಿತ-ಸೇವಾ ರೆಸ್ಟೋರೆಂಟ್‌ಗಳವರೆಗೆ ಅಸ್ವಿತ್ವದಲ್ಲಿರುವ ಕೊಡುಗೆಗಳನ್ನು ಪಡೆಯುವುದನ್ನು ಮುಂದುವರಿಸಲಿದ್ದಾರೆ.

ಜೊಮ್ಯಾಟೊ ಪ್ರೊ ಅನ್ನು ಇನ್ನಷ್ಟು ಹೆಚ್ಚು ಸ್ನೇಹಪರವಾಗಿ ವಿನ್ಯಾಸಗೊಳಿಸಲಾಗಿದೆ. ಜೊಮ್ಯಾಟೊ ಗೋಲ್ಡ್‌ನಲ್ಲಿ ಹೊಂದಿದ್ದಕ್ಕಿಂತ ಜೊಮ್ಯಾಟೊ ಪ್ರೊನಲ್ಲಿ 50% ಹೆಚ್ಚಿನ ಪಾಲುದಾರ ರೆಸ್ಟೋರೆಂಟ್‌ಗಳಿಗೆ ಸೈನ್ ಅಪ್ ಮಾಡಿದೆ.Source link